ನವದೆಹಲಿ:ಬ್ಯಾಂಕಿನಲ್ಲಿ ಸಾಲ ಪಡೆಯುವುದು ಎಷ್ಟು ಕಷ್ಟವೋ, ಅದನ್ನು ಅವಧಿಗಿಂತ ಮುಂಚಿತವಾಗಿ ತೀರಿಸುವುದು (Pre-closure) ಕೂಡ ಅಷ್ಟೇ ಕಷ್ಟವಾಗಿತ್ತು. ಕೈಯಲ್ಲಿ ಹಣವಿದ್ದರೂ, ಸಾಲ ಮುಕ್ತರಾಗಲು ಮುಂದಾದಾಗ ಬ್ಯಾಂಕುಗಳು ವಿಧಿಸುತ್ತಿದ್ದ ಭಾರೀ ಫೋರ್‌ಕ್ಲೋಸರ್ / ಪ್ರೀ-ಪೇಮೆಂಟ್ ಶುಲ್ಕಗಳು ಅನೇಕ ಸಾಲಗಾರರನ್ನು ಹಿಂದೆ ಸರಿಯುವಂತೆ ಮಾಡುತ್ತಿದ್ದವು.
ಆದರೆ ಈಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ.
ಸಾಮಾನ್ಯ ಜನರ ಜೇಬಿಗೆ ಹೊರೆಯಾಗದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ನಿರ್ಧಾರವನ್ನು ಜಾರಿಗೆ ತಂದಿದ್ದು, ಸಾಲಗಾರರಿಗೆ ಇದು ನಿಜಕ್ಕೂ ಹಬ್ಬದ ಸುದ್ದಿಯಾಗಿದೆ.
RBI ಹೊಸ ನಿಯಮ ಏನು ಹೇಳುತ್ತದೆ?
ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ:
ಫ್ಲೋಟಿಂಗ್ ಬಡ್ಡಿದರ (Floating Interest Rate) ಮೇಲೆ ಪಡೆದಿರುವ
ವೈಯಕ್ತಿಕ ಸಾಲಗಳು (Personal Loan)
ಗೃಹ ಸಾಲಗಳು (Home Loan)
ವಾಹನ ಸಾಲಗಳು (Vehicle Loan)
ಇವುಗಳನ್ನು ಅವಧಿಗೆ ಮುಂಚಿತವಾಗಿ ತೀರಿಸಿದರೆ,
ಬ್ಯಾಂಕುಗಳು ಯಾವುದೇ ಪ್ರೀ-ಪೇಮೆಂಟ್ ಅಥವಾ ಫೋರ್‌ಕ್ಲೋಸರ್ ಶುಲ್ಕ ವಸೂಲಿ ಮಾಡುವಂತಿಲ್ಲ.
ಅಂದರೆ,
ನಿಮ್ಮ ಬಳಿ ಹಣವಿದ್ದಾಗ ಸಾಲವನ್ನು ಕ್ಲೋಸ್ ಮಾಡಲು ಹೋಗಿದರೆ
ಬ್ಯಾಂಕುಗಳು ಹೆಚ್ಚುವರಿ ಒಂದು ರೂಪಾಯಿಯನ್ನೂ ಕೇಳುವಂತಿಲ್ಲ.
ಈ ಸೌಲಭ್ಯ ಯಾರಿಗೆ ಅನ್ವಯಿಸುತ್ತದೆ?
???? ವೈಯಕ್ತಿಕ ಸಾಲಗಾರರಿಗೆ ಮಾತ್ರ
ಸ್ವಂತ ಅಗತ್ಯಗಳಿಗಾಗಿ ಪಡೆದ ಸಾಲಗಳು
???? ಫ್ಲೋಟಿಂಗ್ ಬಡ್ಡಿದರ ಸಾಲಗಳಿಗೆ ಮಾತ್ರ
ಮಾರುಕಟ್ಟೆ ಬಡ್ಡಿದರದಂತೆ ಬದಲಾಗುವ EMI ಇರುವ ಸಾಲಗಳು
???? ವೈಯಕ್ತಿಕ ಉದ್ದೇಶಗಳಿಗೆ ಮಾತ್ರ
ವ್ಯವಹಾರ (Business) ಉದ್ದೇಶಕ್ಕಾಗಿ ಪಡೆದ ಸಾಲಗಳಿಗೆ ಕೆಲವು ಸಂದರ್ಭಗಳಲ್ಲಿ ಶುಲ್ಕ ಇರಬಹುದು
ಬ್ಯಾಂಕುಗಳು ತೊಂದರೆ ನೀಡಿದರೆ ಏನು ಮಾಡಬೇಕು?
ಕೆಲವು ಬ್ಯಾಂಕುಗಳು
ಸರ್ವಿಸ್ ಚಾರ್ಜ್ ಹೆಸರಿನಲ್ಲಿ
ಪ್ರಕ್ರಿಯೆ ವಿಳಂಬ ಮಾಡಿ
ಅಥವಾ ಬೇರೆ ಕಾರಣ ಹೇಳಿ
ಸಾಲ ಮುಂಚಿತವಾಗಿ ತೀರಿಸುವ ಗ್ರಾಹಕರಿಗೆ ತೊಂದರೆ ನೀಡಬಹುದು.
ಆದರೆ RBI ನಿಯಮದ ಪ್ರಕಾರ:
ಸಾಲದ ಒಪ್ಪಂದದಲ್ಲಿ (Loan Agreement) ಎಲ್ಲ ಶುಲ್ಕಗಳು ಸ್ಪಷ್ಟವಾಗಿರಬೇಕು
ಗ್ರಾಹಕರು ಕೇಳಿದ ತಕ್ಷಣ No Due / NOC ಪ್ರಮಾಣಪತ್ರ ನೀಡಬೇಕು
ಅನಗತ್ಯ ವಿಳಂಬ ಮಾಡಿದರೆ ಬ್ಯಾಂಕುಗಳೇ ದಂಡ ಪಾವತಿಸಬೇಕಾಗುತ್ತದೆ
ಸಾಲ ಮುಂಚಿತ ತೀರಿಸುವವರಿಗೆ 3 ಗೋಲ್ಡನ್ ಟಿಪ್ಸ್
ಅಸಲು ಮೊತ್ತಕ್ಕೆ ಹಣ ಜಮೆ ಮಾಡಿ
ಹೆಚ್ಚುವರಿ ಹಣವಿದ್ದಾಗ ಅದನ್ನು ಬಡ್ಡಿಗೆ ಅಲ್ಲ, Principal Amount ಕಡಿಮೆ ಮಾಡಲು ಬಳಸಿರಿ.
NOC ತಪ್ಪದೇ ಪಡೆಯಿರಿ
ಸಾಲ ಕ್ಲೋಸ್ ಆದ ತಕ್ಷಣ No Objection Certificate (NOC) ಪಡೆದುಕೊಳ್ಳುವುದು ಅತ್ಯಂತ ಮುಖ್ಯ.
CIBIL ಸ್ಕೋರ್ ಪರಿಶೀಲಿಸಿ
ಸಾಲ ಮುಚ್ಚಿದ ಒಂದು ತಿಂಗಳ ಬಳಿಕ
ನಿಮ್ಮ CIBIL ವರದಿಯಲ್ಲಿ ಆ ಸಾಲ “Closed” ಎಂದು ಅಪ್‌ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಸಾಲಗಾರರಿಗೆ RBI ಸಂದೇಶ
ಬೋನಸ್, ಅರೆರ್ಸ್ ಅಥವಾ ಹೆಚ್ಚುವರಿ ಆದಾಯ ಬಂದಾಗ, ಅದನ್ನು ಖರ್ಚು ಮಾಡುವ ಬದಲು ಸಾಲದ ಅಸಲು ತೀರಿಸಲು ಬಳಸಿದರೆ,
EMI ಹೊರೆ ಕಡಿಮೆಯಾಗುತ್ತದೆ
ಲಕ್ಷಾಂತರ ರೂಪಾಯಿ ಬಡ್ಡಿ ಉಳಿತಾಯವಾಗುತ್ತದೆ
ಈಗ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದ ಕಾರಣ, ಧೈರ್ಯವಾಗಿ ಸಾಲ ಮುಕ್ತರಾಗಬಹುದು.
ಮಧ್ಯಮ ವರ್ಗದ ಜನರಿಗೆ RBI ನಿರ್ಧಾರ ದೊಡ್ಡ ಸಮಾಧಾನ ತಂದಿದೆ.







