ಔರಾದ: 2025-26 ಸಾಲಿನ ಪ್ರತಿಷ್ಠತ ಶಾಲೆಗಳಿಗೆ ಆಂಗ್ಲ ಮಧ್ಯಮದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವ ಕುರಿತು ಬೀದರ ಜಿಲ್ಲೆಯ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ದ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘ(ರಿ) ಬೀದರ ಸಂಘಟನೆ ವತಿಯಿಂದ ದೂರು ನೀಡಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಷ್ಠ ಶಿಕ್ಷೆಣ ಯೋಜನೆ ಅಡಿಯಲ್ಲಿ 2025-26ನೇ ಪ್ರತಿಷ್ಠತ ಶಾಲೆಗಳ ಪ್ರವೇಶಕ್ಕಾಗಿ ದಿನಾಂಕ 09/05/2025 ರಂದು ಕನ್ನಡ ಮತ್ತು ಆಂಗ್ಲ ಮಾಧ್ಯಮದ ವಿಧ್ಯಾರ್ಥಿಗಳು 6ನೇ ತರಗತಿ ಪ್ರವೇಶಕ್ಕಾಗಿ ಪರಿಕ್ಷೇಬರೆದು ಪಾಸಾಗಿದ್ದು, ಅದರಲ್ಲಿ ಆಂಗ್ಲ ಮಾಧ್ಯಮದ ವಿಧ್ಯಾರ್ಥಿಗಳಿಗೆ ಪ್ರವೇಶವನ್ನು ಕನ್ನಡ ಮಾಧ್ಯಮದ ಶಾಲೆ ಶಾಲೆಗೆ ಪ್ರವೇಶ ಕೊಡುತ್ತಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸಮಾಡಿದ ಮಕ್ಕಳಿಗೆ ಕನ್ನಡ ಮಾಧ್ಯಾಮದಲ್ಲಿ ಭೋದಿಸುವುದು ಎಷ್ಟು ಸರಿ ?
ಈ ಹಿಂದೆ ಆಂಗ್ಲ ಮಾಧ್ಯಮದಲ್ಲಿ ಕಲಿತ ವಿಧ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಕೊಡುತ್ತಿದ್ದರು/ಕೊಟ್ಟಿದಾರೆ. ಆದರೆ ಈ ವರ್ಷ ಆಂಗ್ಲ ಮಾಧ್ಯಮದ ಶಾಲೆಗೆ ಕೊಡುವ ಬದಲು ಕನ್ನಡ ಮಾಧ್ಯಮದ ಶಾಲೆಗೆ ಪ್ರವೇಶ ಕೊಡುತ್ತಿದಾರೆ. ಮಾನ್ಯ ಸಮಾಜ ಕಲ್ಯಾಣ ಅಧಿಕಾರಿಗಳು ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತಗೋಳಿಸುತ್ತಿದಾರೆ ಈ ದೋರಣೆಯನ್ನು ತಡೆಗಟ್ಟಿ ಆಂಗ್ಲ ಮಾಧ್ಯಮದ ವಿಧ್ಯಾರ್ಥಿಗಳಿಗೆ ಮಕ್ಕಳ ಮುಂದಿನ ಉಜ್ವಲಭವಿಶಕ್ಕಾಗಿ ಜಿಲ್ಲೆಯ ಯಾವುದಾದರು ಆಂಗ್ಲ ಮಾಧ್ಯಮದ ಶಾಲೆಗೆ ಪ್ರವೇಶ ಕೊಡಿಸಬೇಕು.
ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘ(ರಿ) ಬೀದರ ಮುಖಂಡರಾದ ಶ್ರೀ ಸೂರ್ಯಕಾಶಂತ ಸಾದುರೆ ಜಿಲ್ಲಾಧ್ಯಕ್ಷರು ಬೀದರ, ಶ್ರೀ ಸಂತೋಷ ಕೆ ಶಿಂದೆ ಪ್ರಧಾನ ಕಾರ್ಯದರ್ಶಿ, ಶ್ರೀ ಅಶೋಕ ವಗ್ಗೆ ಕಾರ್ಮಿಕ ಹಿರಿಯ ಮುಖಂಡರು, ಶ್ರೀ ಪ್ರವೀಣ ಕಾರಂಜೆ ಸಿವಿಲ್ ಇಂಜಿನಿಯರ, ಶ್ರೀ ಅನಿಲ ಭುಜಂಗೆ ಕಾರ್ಮಿಕ ಮುಖಂಡರು, ಶ್ರೀ ಗೌತಮ ಮುತಂಗಿಕರ್ ಯುವ ಹೋರಾಟಗಾರರು ಇವರ ವತಿಯಿಂದ ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ದೂರು ನೀಡಿದರು.








