ಕರ್ನಾಟಕದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ವಯೋಮಿತಿ ಹೆಚ್ಚಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇನ್ನು ಕರ್ನಾಟಕದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ವಯೋಮಿತಿ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಸಿದ್ದರಾಮಯ್ಯ ಅವರು ಭರವಸೆ ಕೊಟ್ಟಿದ್ದರು. ಆದರೆ ಅದನ್ನು ಜಾರಿಗೆ ತಂದಿಲ್ಲ ಎಂದ ಅಸಮಾಧಾನ ವ್ಯಕ್ತವಾಗಿದೆ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು ಕಾಂತಕುಮಾರ್ ಆರ್ ಅವರು ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಐದು ವರ್ಷ ವಯೋಮಿತಿ ಹೆಚ್ಚಿಸದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುತ್ತಿಗೆ ಹಾಕುವ ಬಗ್ಗೆ ಅವರು ಮಾತನಾಡಿದ್ದಾರೆ.
ನಮಸ್ತೆ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ ನೀವು ಪೊಲೀಸ್ ಕಾನ್ಸ್‌ಟೇಬಲ್ ವಯೋಮಿತಿ ಹೆಚ್ಚಿಗೆ ಮಾಡುವುದಾಗಿ ಈ ಹಿಂದೆಯೇ ಹೇಳಿಕೆ ಕೊಟ್ಟಿದ್ದಿರಿ. ವಿರೋಧ ಪಕ್ಷದಲ್ಲಿ ಇದ್ದಾಗ ಕೂಡ ಹೇಳಿಕೆ ನೀಡಿ ಪೊಲೀಸ್ ಕಾನ್ಸ್‌ಟೇಬಲ್ ವಯೋಮಿತಿ ಸಾಮನ್ಯ ವರ್ಗ 30 ವರ್ಷ SC/ST/OBC ಗೆ 33 ವರ್ಷ ಮಾಡುತ್ತೇನೆ ಎಂದು ಭರವಸೆ ಕೊಟ್ಟು ನೀವು ರಾಜ್ಯ ಸಿವಿಲ್ ಸೇವೆಗಳಿಗೆ 2 ವರ್ಷ ವಯೋಮಿತಿ ಸಡಿಲಿಕೆ ಮಾಡಿದ್ದೀರಾ. ಆದರೆ, ಗೃಹ ಸಚಿವ ಜಿ. ಪರಮೇಶ್ವರ್ ಪೊಲೀಸ್ ಇಲಾಖೆಯಲ್ಲಿ 5/6 ವರ್ಷದಿಂದ ಸರಿಯಾಗಿ ನೇಮಕಾತಿ ಆಗಿಲ್ಲ ನೀವು ಚಾಮುಂಡೇಶ್ವರಿ ನೆಲದಲ್ಲಿ ಟ್ವೀಟ್ ಕೂಡ ಮಾಡಿರುತ್ತೀರಿ. ಮತ್ತೆ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟ ತಕ್ಷಣ ಎಷ್ಟು ಅಭ್ಯರ್ಥಿಗಳು ಖಾಸಗಿ ಕೆಲಸ ಬಿಟ್ಟು ಓದುತ್ತಿದ್ದಾರೆ.
ಈ ವಯೋಮಿತಿಯನ್ನು ರಾಜ್ಯ ಪತ್ರದಲ್ಲಿ ಹೊರಡಿಸುವ ಮೂಲಕ ಬಡ ಮಕ್ಕಳ ಪರವಾಗಿ ನಿಲ್ಲಿಬೇಕು. ಅದೇ ರೀತಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ 5 ವರ್ಷದಿಂದ ನೇಮಕಾತಿ ಆಗಿಲ್ಲ ಅದು ಕೂಡ ಹೆಚ್ಚಿಗೆ ಮಾಡಿ ನೊಂದ ಬಡ ವಿದ್ಯಾರ್ಥಿಗಳ ಪರವಾಗಿ ನಿಂತು. ಸಾಮಾಜಿಕ ನ್ಯಾಯ ಕೊಡಿ ನೀವು ಅಧಿಕಾರಿಗಳ ಮಾತು ಕೇಳಿ ವಿದ್ಯಾರ್ಥಿಗಳಿಗೆ ಮೋಸ ಮಾಡಿದರೆ, ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸಂಕಷ್ಟವಾಗಲಿದೆ. ದಯವಿಟ್ಟು ಆದಷ್ಟು ಬೇಗ ಈ ಗೊಂದಲಕ್ಕೆ ಒಂದು ತೆರೆ ಎಳೆದು ವಿದ್ಯಾರ್ಥಿಗಳ ಕಣ್ಣೀರು ಒರೆಸಿ, ಕರ್ನಾಟಕದ ಮುಖ್ಯಮಂತ್ರಿ ಅವರೇ ಸಾಮಜಿಕ ಹರಿಕಾರ ದಿನ ದಲಿತರ ಬಂದು ಅಂತ ಸ್ವೀಕಾರ ಮಾಡಿದ್ದಾರೆ ನಿಮ್ಮನ್ನು ವಿದ್ಯಾರ್ಥಿಗಳು ಮೋಸ ಮಾಡಬೇಡಿ ಎಂದು ಲಕ್ಷಾಂತರ ಅಭ್ಯರ್ಥಿಗಳ ಬೇಡಿಕೆ ಈಡೇರಸಿ ಎಂದು ಮನವಿ ಮಾಡಿದ್ದಾರೆ.







