ಬೆಂಗಳೂರು : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಎಂಬಂತೆ ಪೊಲೀಸ್ ಇಲಾಖೆಯಲ್ಲಿ 2032 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹುದ್ದೆಯ ವಿವರ ಹುದ್ದೆಗಳ ಸಂಖ್ಯೆ
ಕೆ.ಎಸ್.ಆರ್.ಪಿ. ಸ್ಪೆ.ಆರ್ಪಿಸಿ (ಪುರುಷ ಮತ್ತು ಮಹಿಳೆ, ಸ್ಥಳಿಯೇತರ) 1,500 ಹುದ್ದೆಗಳು
ಕೆ.ಎಸ್.ಆರ್.ಪಿ. ಸ್ಪೆ.ಆರ್ಪಿಸಿ (ಸ್ಥಳೀಯ ವೃಂದ) 336 ಹುದ್ದೆಗಳು
ಐ.ಆರ್.ಬಿ., ಮುನಿರಾಬಾದ್ ಘಟಕ 166 ಹುದ್ದೆಗಳು
ಒಟ್ಟು ಹುದ್ದೆಗಳು 2,032
ಪೊಲೀಸ್ ಇಲಾಖೆಯು ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ.ಪೊಲೀಸ್ ಪ್ರಧಾನ ಕಚೇರಿಯಿಂದ ಈ ಕುರಿತು ಅಕ್ಟೋಬರ್ 14, 2025 ರಂದು ಆದೇಶವನ್ನು ಕಳುಹಿಸಲಾಗಿದೆ.ನೇಮಕಾತಿ ಪ್ರಕ್ರಿಯೆಯಲ್ಲಿ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ವೃಂದಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಸರ್ಕಾರದಿಂದ ಬಂದಿರುವ ಸ್ಪಷ್ಟೀಕರಣ ಮತ್ತು ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ನೇರ ನೇಮಕಾತಿಯಲ್ಲಿ ಪ್ರಶಂಸನೀಯ ಕ್ರೀಡಾಪಟುಗಳಿಗೆ (Sports Persons) ಪ್ರತಿ ನೇರ ಮೀಸಲಾತಿ ವರ್ಗದಡಿ ಶೇ. 3% ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ.ಘಟಕಗಳಿಗೆ ಮರು-ಪ್ರಸ್ತಾವನೆ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 16, 2025.ಉದ್ಯೋಗಾಕಾಂಕ್ಷಿಗಳು ಈ ಬಗ್ಗೆ ಶೀಘ್ರದಲ್ಲೇ ಹೊರಬೀಳಲಿರುವ ಅಧಿಕೃತ ನೇಮಕಾತಿ ಅಧಿಸೂಚನೆಗಾಗಿ ಕಾಯಬಹುದು.
ಪೊಲೀಸ್ ಪ್ರಧಾನ ಕಚೇರಿಯ ದಿನಾಂಕ 13-10-2025ರ ಪತ್ರದಲ್ಲಿ ನೀಡಲಾದ ನಿರ್ದೇಶನಗಳ ಪ್ರಕಾರ, ತಮ್ಮ ಘಟಕಗಳಿಗೆ ಈಗಾಗಲೇ ಹಂಚಿಕೆ ಮಾಡಲಾದ ಹುದ್ದೆಗಳಿಗೆ ಸಲ್ಲಿಸಲಾಗಿದ್ದ ನೇರ ಮತ್ತು ಸಮತಳ (Vertical and Horizontal) ವರ್ಗೀಕರಣವನ್ನು ಕೂಡಲೇ ಮಾರ್ಪಡಿಸಬೇಕು.
ಸರ್ಕಾರದ ಪತ್ರ ಸಂಖ್ಯೆ: ಎಚ್ಡಿ 149 ಪಿಪಿಎ 2025 (ದಿನಾಂಕ 10-10-2025) ರ ಪ್ರಕಾರ, ಪ್ರತಿ ನೇರ ಮೀಸಲಾತಿ ವರ್ಗದಡಿ ಶೇಕಡಾ 3% ರಷ್ಟು ಪ್ರಶಂಸನೀಯ ಕ್ರೀಡಾಪಟುಗಳ (Meritorious Sports Persons) ಮೀಸಲಾತಿಯನ್ನು ಕಡ್ಡಾಯವಾಗಿ ಅಳವಡಿಸಬೇಕು.
ಮಾರ್ಪಡಿಸಿದ ನೇರ ಮತ್ತು ಸಮತಳ ವರ್ಗೀಕರಣದ (ಕ್ರೀಡಾಪಟುಗಳ ಮೀಸಲಾತಿ ಒಳಗೊಂಡಂತೆ) ಮರು ಪ್ರಸ್ತಾವನೆಯನ್ನು ದಿನಾಂಕ 16-10-2025ರೊಳಗಾಗಿ ಈ ಕಚೇರಿಯ ಇ-ಮೇಲ್ ಐಡಿ est6ksrphg@ksp.gov.in ಗೆ ಕಳುಹಿಸಿಕೊಡುವಂತೆ ಸ್ಪಷ್ಟವಾಗಿ ಸೂಚಿಸಲಾಗಿದೆ.







