Home » ರಾಜ್ಯ » ತಾತ್ಕಾಲಿಕ ಆತಿಥಿ ಉಪನ್ಯಾಸಕರ ಅರ್ಜಿ ಅವ್ಹಾನ

ತಾತ್ಕಾಲಿಕ ಆತಿಥಿ ಉಪನ್ಯಾಸಕರ ಅರ್ಜಿ ಅವ್ಹಾನ

ಬೆಂಗಳೂರು: ಸೇವಾ ಅನುಭವ ಹಾಗೂ ಯುಜಿಸಿ ವಿದ್ಯಾರ್ಹತೆ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ 2025-26ನೇ ಸಾಲಿಗೆ ಆನ್‌ಲೈನ್‌ ಕೌನ್ಸೆ ಲಿಂಗ್‌ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲು ವೇಳಾಪಟ್ಟಿಯನ್ನು ಕಾಲೇಜು ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ.

ಜೂನ್‌ 26ರಂದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿ ಜುಲೈ 3ರಂದು ಮುಗಿಯಲಿದೆ.

ಜುಲೈ 4ರಂದು ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್‌ ಪಟ್ಟಿಯನ್ನು ಪ್ರಕಟಿಸಲಾಗುವುದು. ಆನ್‌ಲೈನ್‌ ಅರ್ಜಿಯನ್ನು ಎಡಿಟ್‌ ಮಾಡಲು ಜುಲೈ 4ರಿಂದ 8ರ ವರೆಗೆ ಅವಕಾಶವಿದೆ. ತಾತ್ಕಾಲಿಕ ಕಾರ್ಯಭಾರ ಹಾಗೂ ಅಭ್ಯರ್ಥಿಗಳ ಮೆರಿಟ್‌ ಪಟ್ಟಿಯನ್ನು ಜು.28ರಂದು ಪ್ರಕಟಿಸಲಾಗುತ್ತದೆ. ಆ.4ರಂದು 2025-26ನೇ ಸಾಲಿನ ಅತಿಥಿ ಉಪನ್ಯಾಸಕರ ಸೇವೆಗೆ ವರದಿ ಮಾಡಿಕೊಳ್ಳುವ ಪ್ರಾರಂಭದ ದಿನವಾಗಿದೆ.

ವಿಶೇಷ ಸೂಚನೆ
2024-25ನೇ ಸಾಲಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವವರು ಮತ್ತೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಸಲ್ಲಿಸಿರುವ ಅರ್ಜಿಯ ಮಾಹಿತಿಯನ್ನು ತಿದ್ದುಪಡಿ ಅಥವಾ ಅಪ್‌ಡೇಟ್‌ ಮಾಡಲು ಅವಕಾಶ ಇದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಅಥವಾ ಎಡಿಟ್‌ ಮಾಡಲು ಇಲಾಖೆಯ ಅಂತರ್ಜಾಲ dce.karnataka.gov.in ಸಂಪರ್ಕಿಸಬಹುದು ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This