Home » ರಾಜ್ಯ » ಜಾತಿಗಣತಿ ಸಭೆ: ಒಬಿಸಿ ಮೀಸಲಾತಿ 51%ಗೆ ಹೆಚ್ಚಳಕ್ಕೆ ಪ್ರಸ್ತಾವನೇ

ಜಾತಿಗಣತಿ ಸಭೆ: ಒಬಿಸಿ ಮೀಸಲಾತಿ 51%ಗೆ ಹೆಚ್ಚಳಕ್ಕೆ ಪ್ರಸ್ತಾವನೇ

ಹಿಂದುಳಿದ ವರ್ಗಗಳ ಆಯೋಗ ಸಲ್ಲಿಕೆ ಮಾಡಿರುವ ಕರ್ನಾಟಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿಯ ಕುರಿತು ಇಂದು ( ಏಪ್ರಿಲ್ 17 ) ವಿಶೇಷ ಸಚಿವ ಸಂಪುಟ ಸಭೆ ವಿಧಾನಸಭೆಯಲ್ಲಿ ನಡೆಯುತ್ತಿದೆ.

ಸಚಿವರೆಲ್ಲರಿಗೂ ವರದಿಯ ಪ್ರತಿಯನ್ನು ನೀಡಿ ಅಧ್ಯಯನ ಮಾಡಿಕೊಂಡು ಬಂದಿದ್ದು ಸಿಎಂ ಎಲ್ಲ ಸಚಿವರಿಂದ ವೈಯಕ್ತಿಕವಾಗಿ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಸದ್ಯ ಸಭೆ ಆರಂಭವಾಗುತ್ತಿದ್ದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆರು ಪುಟಗಳ ಟಿಪ್ಪಣಿಯನ್ನು ಸಲ್ಲಿಸಿದ್ದು, ಈ ಪೈಕಿ ಶಿಫಾರಸು ಮಾಡಿದ ಅಂಶಗಳೂ ಸಹ ಇವೆ.

ಒಬಿಸಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಹಿಂದುಳಿದ ವರ್ಗಗಳ ಇಲಾಖೆ ಪ್ರಸ್ತಾವನೆಯನ್ನು ಮಂಡಿಸಿದೆ. ಒಬಿಸಿ ಮೀಸಲಾತಿ ಪ್ರಮಾಣವನ್ನು 32ರಿಂದ 51%ಗೆ ಹೆಚ್ಚಳ ಮಾಡಬೇಕೆಂದು ಪ್ರಸ್ತಾವನೆ ಮಂಡನೆಯಾಗಿದೆ.

ತಮಿಳನಾಡಿನಲ್ಲಿ ಒಬಿಸಿ ಮೀಸಲಾತಿ ಶೇ. 69ರಷ್ಟಿದೆ ಹಾಗೂ ಜಾರ್ಖಂಡ್‌ನಲ್ಲಿ ಹಿಂದುಳಿದ ವರ್ಗಕ್ಕೆ ಶೇ. 77ರಷ್ಟು ಮೀಸಲಾತಿ ಇದೆ. ಈ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಮೀಸಲಾತಿ ಹೆಚ್ಚಿಸಿ ಎಂದು ಪ್ರಸ್ತಾಪಿಸಲಾಗಿದೆ.

ಹೀಗೆ ಶಿಫಾರಸ್ಸಿನ ಪ್ರಕಾರವೇನಾದರೂ ಒಬಿಸಿಗೆ 51%ಗೆ ಮೀಸಲಾತಿಯನ್ನು ಹೆಚ್ಚಳ ಮಾಡಿದರೆ ಯಾವ ಯಾವ ಕೆಟಗರಿಗಳಿಗೆ ಎಷ್ಟು ಮೀಸಲಾತಿ ಸಿಗಬಹುದು ಎಂಬ ಮಾಹಿತಿ ಇಲ್ಲಿದೆ: ಪ್ರವರ್ಗ 2ಎ 10%, ಪ್ರವರ್ಗ 2ಬಿ 8%, ಪ್ರವರ್ಗ 3ಎ 7%, ಪ್ರವರ್ಗ 3ಬಿ 8%, ಪ್ರವರ್ಗ 1ಗೆ 6%, ಪ್ರವರ್ಗ 1ಬಿಗೆ 12%

Source by karunadasuddhi

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This