ಚಿತ್ರದುರ್ಗ, ಫೆ.7: ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಗ್ರಾಮೀಣ ಭಾಗದ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗ ಉತ್ತೇಜನಕ್ಕಾಗಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯ ಅವಧಿ 31 ದಿನಗಳಾಗಿದ್ದು, ಇದೇ ಫೆ.10ರಿಂದ ಪ್ರಾರಂಭವಾಗಲಿದೆ. ತರಬೇತಿ ಊಟ ಹಾಗೂ ವಸತಿ ಸಹಿತ ಸಂಪೂರ್ಣ ಉಚಿತವಾಗಿರುತ್ತದೆ. 19ರಿಂದ 45 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನ್ನಡ ಓದು–ಬರಹ ತಿಳಿದಿರಬೇಕು. ಟೈಲರಿಂಗ್ ಕುರಿತು ಪ್ರಾಥಮಿಕ ಜ್ಞಾನ ಹಾಗೂ ಸ್ವ ಉದ್ಯೋಗ ಮಾಡುವ ಆಸಕ್ತಿ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಸ್ವವಿಳಾಸದ ಅರ್ಜಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಗಳೊಂದಿಗೆ ಇದೇ ಫೆ.10ರಂದು ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆಗೆ ನೇರವಾಗಿ ಹಾಜರಾಗಿ ತರಬೇತಿಯಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ. 8618284445, 8660627785 ಸಂಪರ್ಕಿಸಬಹುದು ಎಂದು ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.







