Home » ದೇಶ » ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯಲ್ಲಿ ಭರ್ತಿ – ತಕ್ಷಣ ಅರ್ಜಿ ಸಲ್ಲಿಸಿ!

ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯಲ್ಲಿ  ಭರ್ತಿ – ತಕ್ಷಣ ಅರ್ಜಿ ಸಲ್ಲಿಸಿ!

ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ 2,152 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪ್ರಮುಖ ಅಂಶಗಳು ಹಾಗೂ ಮಾಸಿಕ ಸಂಬಳದ ಕುರಿತು ಗಮನಹರಿಸಬೇಕು.BPNL ಲೈವ್ ಸ್ಟಾಕ್ ಇನ್ವೆಸ್ಟ್ಮೆಂಟ್ ಆಫೀಸರ್, ಲೈವ್ ಸ್ಟಾಕ್ ಇನ್ವೆಸ್ಟ್ಮೆಂಟ್ ಅಸಿಸ್ಟೆಂಟ್ ಮತ್ತು ಲೈವ್ ಸ್ಟಾಕ್ ಆಪರೇಶನ್ಸ್ ಅಸಿಸ್ಟೆಂಟ್ ಸೇರಿದಂತೆ ಹಲವು ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ.

ಈ ಸಂಬಂಧ ಅಧಿಸೂಚನೆಗಳನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.

ಹುದ್ದೆಗಳ ವಿವರ :-

ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:-

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷಾ ಅಂಕಗಳ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು.

ವೇತನದ ವಿವರ

ಹುದ್ದೆಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ. ಉದಾಹರಣೆಗೆ, ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ ಹುದ್ದೆಗೆ ತಿಂಗಳಿಗೆ ₹38,200 ಸಿಗುತ್ತೆ. ಸಹಾಯಕ ಹೂಡಿಕೆ ಅಂಗಸಂಸ್ಥೆ ಹುದ್ದೆಗೆ ₹30,500 ಹಾಗೂ ಕಾರ್ಯಾಚರ


ಹುದ್ದೆಗಳ ವಿವಿರ ಈ ಕೇಳಗಿಂನಂತೆ
ಕೊನೆಯ ದಿನಾಂಕ ಮಾರ್ಚ್ 12, 2025

ಅರ್ಜಿ ಸಲ್ಲಿಸಲು, https://www.bharatiyapashupalan.com ಭೇಟಿ ನೀಡಿ.

ವಯೋಮಿತಿ;

ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21- 45 ವರ್ಷ ಮೀರಿರಬಾರದು

ಶೈಕ್ಷಣಿಕ ಅರ್ಹತೆ;

ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಆಫೀಸರ್‌ ವಿಭಾಗದಲ್ಲಿ 362 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಅಸಿಸ್ಟಂಟ್‌ ವಿಭಾಗದಲ್ಲಿ 1,428 ಹುದ್ದೆಗಳ ಭರ್ತಿಗೆ ನೇಮಕಾತಿ ನೆಡಯಲಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಉತ್ತೀರ್ಣರಾಗಿರಬೇಕು.

ಲೈವ್‌ಸ್ಟಾಕ್‌ ಫಾರ್ಮ್‌ ಆಪರೇಷನ್ಸ್‌ ಅಸಿಸ್ಟಂಟ್‌ ವಿಭಾಗದಲ್ಲಿ ಖಾಲಿ ಇರುವ 362 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು.

ಅರ್ಜಿ ಶುಲ್ಕ;
ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 944 ರೂ., ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಅಸಿಸ್ಟಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 826 ರೂ. ಮತ್ತು ಲೈವ್‌ಸ್ಟಾಕ್‌ ಫಾರ್ಮ್‌ ಆಪರೇಷನ್ಸ್‌ ಅಸಿಸ್ಟಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 708 ರೂ. ಅರ್ಜಿ ಶುಲ್ಕವಿದ್ದು, ಆನ್‌ಲೈನ್‌ ಮೂಲಕ ಪಾವತಿಸಬೇಕು.

Source: karunadusuddi

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This