ಔರಾದ್(ರ), ಡಿಸೆಂಬರ್ 10, 2025:
ಔರಾದ್ ಪಟ್ಟಣದ ನವಕೀರಣ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರ ಕೂಲಿ ಕಾರ್ಮಿಕರ ಜನಹಿತ ಸಂಘದ ವತಿಯಿಂದ RPL (Recognition of Prior Learning) ತರಬೇತಿ ಕಾರ್ಯಕ್ರಮವನ್ನು ಇಂದು ಮುಂಜಾನೆ 10 ಗಂಟೆಗೆ ಭವ್ಯವಾಗಿ ಪ್ರಾರಂಭಿಸಲಾಯಿತು.
ಕಾರ್ಯಕ್ರಮಕ್ಕೆ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಅನಿಲ್ ಭುಜಂಗೆ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದು ಮತ್ತು ಜಿಲ್ಲಾ ಪ್ರಧಾನ್ ಕಾರ್ಯದರ್ಶಿ ಶ್ರೀ ಸಂತೋಷ್ ಶಿಂದೆ ಆದೇರೀತಿ ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಘಟಕಗಳ ಪ್ರತಿನಿಧಿಗಳು, ಸಂಘದ ಕಾರ್ಯಕರ್ತರು ಹಾಗೂ ಮಂದಿ ಕೂಲಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
RPL ತರಬೇತಿಯ ಉದ್ದೇಶವಾಗಿ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಅನಿಲ್ ಭುಜಂಗೆ ಅವರು ಕಾರ್ಮಿಕರ ಕೌಶಲ್ಯಗಳನ್ನು ಅಧಿಕೃತವಾಗಿ ಮಾನ್ಯತೆ ನೀಡುವುದು, ಸುಕ್ಷಮ ಕೌಶಲ್ಯಗಳನ್ನು ಮರುಪರಿಶೀಲನೆ ಮಾಡುವುದು ಹಾಗೂ ಮುಂದಿನ ಉದ್ಯೋಗಾವಕಾಶಗಳಿಗೆ ಸಹಾಯಕವಾಗುವಂತೆ ತಯಾರಿಸುವುದು ಎಂದು ತಿಳಿಸುತ್ತಾ, ಕಾರ್ಮಿಕರು ಸರಿಯಾದ ರೀತಿಯಲ್ಲಿ ತರಬೇತಿ ಪಡೆದು, ತಮ್ಮ ವೃತ್ತಿ ಸುರಕ್ಷತೆ ಮತ್ತು ಕೌಶಲ್ಯ ಮಟ್ಟವನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕೆಂದು ತಿಳಿಸುತ್ತಾ ಈ ತರಬೇತಿ ಕಾರ್ಯಕ್ರಮವು ಮುಂದಿನ ದಿನಗಳಲ್ಲಿಯೂ ನಡೆಯಲಿದೆ ಎಂದು ಅವರು ಕಾರ್ಮಿಕರಲ್ಲಿ ಒಂದು ಒಳ್ಳೆ ಮನೋಬಲವನ್ನು ತುಂಬಿದರು.







