ಬೆಂಗಳೂರು ಮಲ್ಲೇಶ್ವರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕರಾಮುವಿ) ಮಹಿಳಾ ಪ್ರಾದೇಶಿಕ ಕೇಂದ್ರದಲ್ಲಿ 2025–26ನೇ ಸಾಲಿನ ಜನವರಿ ಆವೃತ್ತಿಯ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ ಎಂದು ಪ್ರಾದೇಶಿಕ ನಿರ್ದೇಶಕಿ ಶಶಿಕಲಾ ಜೆ. ತಿಳಿಸಿದ್ದಾರೆ.
ಲಭ್ಯವಿರುವ ಕೋರ್ಸ್‌ಗಳು:
ಯುಜಿ ಕೋರ್ಸ್‌ಗಳು:
ಬಿ.ಎ., ಬಿ.ಕಾಂ., ಬಿ.ಎಸ್‌ಡಬ್ಲ್ಯೂ., ಬಿ.ಬಿ.ಎ., ಬಿ.ಸಿ.ಎ.,
ಬಿ.ಎಸ್ಸಿ. (ಜನರಲ್ ಮತ್ತು ಐಟಿ), ಬಿ.ಎಲ್.ಐ.ಎಸ್ಸಿ.
ಪಿಜಿ ಕೋರ್ಸ್‌ಗಳು:
ಎಂ.ಎ., ಎಂ.ಸಿ.ಜೆ., ಎಂ.ಎಸ್‌ಡಬ್ಲ್ಯೂ., ಎಂ.ಕಾಂ.,
ಎಂ.ಎಲ್.ಐ.ಎಸ್ಸಿ., ಎಂ.ಸಿ.ಎ., ಎಂ.ಎಸ್ಸಿ., ಎಂ.ಬಿ.ಎ.
ಇತರೆ ಕಾರ್ಯಕ್ರಮಗಳು:
ಪಿ.ಜಿ. ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು
ಅರ್ಜಿಯ ವಿಧಾನ:
ಆಸಕ್ತ ವಿದ್ಯಾರ್ಥಿಗಳು www.ksoumysuru.ac.in ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಪ್ರವೇಶ ಶುಲ್ಕವನ್ನು ಆನ್‌ಲೈನ್ ಅಥವಾ ಪ್ರಾದೇಶಿಕ ಕಚೇರಿಯಲ್ಲಿ ಪಾವತಿಸಲು ಅವಕಾಶವಿದೆ.
ಶುಲ್ಕ ವಿನಾಯಿತಿ ಸೌಲಭ್ಯ:
ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳು
ಡಿಫೆನ್ಸ್ ಹಾಗೂ ನಿವೃತ್ತ ಸೈನಿಕರು
ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳು
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎಸ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ನೌಕರರು
ಪೂರ್ಣ ಶುಲ್ಕ ವಿನಾಯಿತಿ:
ಕೋವಿಡ್‌ನಿಂದ ಮೃತರಾದವರ ಮಕ್ಕಳು
ಲಿಂಗತ್ವ ಅಲ್ಪಸಂಖ್ಯಾತರು
ದೃಷ್ಟಿಹೀನರು (ಬಿ.ಎಡ್. ಮತ್ತು ಎಂ.ಬಿ.ಎ. ಹೊರತುಪಡಿಸಿ)
ವಿದ್ಯಾರ್ಥಿವೇತನ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಪಿ ಮೂಲಕ ವಿದ್ಯಾರ್ಥಿವೇತನ ಲಭ್ಯ.
ಸಂಪರ್ಕ ಸಂಖ್ಯೆ: 080-27448811, 9741197921
ಮತ್ತು 9483517160







