Home » ಇತ್ತೀಚಿನ ಸುದ್ದಿ » ಕರ್ನಾಟಕ ಬಜೆಟ್ 2025ರ ರೈತರಿಗೆ ಸಿಹಿಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ

ಕರ್ನಾಟಕ ಬಜೆಟ್ 2025ರ ರೈತರಿಗೆ ಸಿಹಿಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 2025-26ರ ದಾಖಲೆಯ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ರೈತರಿಗೆ ಬಂಪರ್ ಗಿಫ್ಟ್ (Special Gift to Farmers) ಕೊಟ್ಟಿದ್ದಾರೆ. ಈ ಬಜೆಟ್ನಲ್ಲಿ ಕೃಷಿ ಇಲಾಖೆಗೆ ಹೆಚ್ಚಿನ ಮಹತ್ವ ನೀಡಿರುವ ‘ರೈತ’ (Loan) ಬಡ್ಡಿ ಮನ್ನಾ (Interest waived) ಮಾಡುವಂತೆ ಘೋಷಿಸಿದ್ದಾರೆ.

ಈ ಎರಡು ಬ್ಯಾಂಕ್ಗಳಲ್ಲಿ ರೈತರು ಸಾಲ ಮಾಡಿದ್ದರೆ, ಅವರ ಬಡ್ಡಿ ಮನ್ನಾ ಆಗಲಿದೆ.

ಡಿಸಿಸಿ (DCC), ಪಿಕಾರ್ಡ್ ಬ್ಯಾಂಕ್‌ಗಳಲ್ಲಿ (Picard Bank) ಸಾಲ ಮಾಡಿರುವ ರೈತರು ಈಗ ಬಡ್ಡಿ ಕಟ್ಟುವ ಹಾಗಿಲ್ಲ. ಈ ಎರಡು ಬ್ಯಾಂಕ್ಗಳಲ್ಲಿ ರೈತರ ಸಾಲದ ಬಡ್ಡಿ ಮನ್ನಾ ಮಾಡಲಾಗಿದೆ. 2 ಬ್ಯಾಂಕ್‌ಗಳಲ್ಲಿ ರೈತರ ಸಾಲದ ಬರೋಬ್ಬರಿ ₹240 ಕೋಟಿ ಬಡ್ಡಿ ಮನ್ನಾ ಮಾಡಲಾಗಿದೆ. ಜೊತೆಗೆ 37 ಲಕ್ಷ ರೈತರಿಗೆ ಸಾಲಕ್ಕಾಗಿ ₹28,000 ಕೋಟಿ ಘೋಷಿಸಲಾಗಿದೆ.

ಅದೇರೀತಿ ಉತ್ತರ ಕರ್ನಾಟಕ ಭಾಗಕ್ಕೂ ಸಿಎಂ ಸಿದ್ದರಾಮಯ್ಯ ಹಲವು ಅನುದಾನಗಳನ್ನ ನೀಡಿದ್ದಾರೆ. ಕಲಬುರಗಿಯಲ್ಲಿ ಪ್ರಾದೇಶಿಕ ಸಹಕಾರ ಭವನ ಸ್ಥಾಪಿಸಲು ₹10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ ಮತ್ತು ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜ್ ಸ್ಥಾಪನೆ ಮಾಡಲು ಘೋಷಣೆ ಮಾಡಲಾಗಿದೆ.

ಕೊಪ್ಪಳದಲ್ಲಿ ಕುರಿ-ಮೇಕೆ ಮಾರುಕಟ್ಟೆ ಅಭವೃದ್ಧಿಗೆ ₹25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಲಬುರಗಿಯಲ್ಲಿ ನೂತನ ಮೆಗಾ ಡೈರಿಗೆ ₹50 ಕೋಟಿ ಅನುದಾನ, ಗ್ರಾಮೀಣ ಉಗ್ರಾಣಗಳ ನಿರ್ಮಾಣಕ್ಕೆ ₹60 ಕೋಟಿ ಘೋಷಿಸಲಾಗಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This