Home » ರಾಜ್ಯ » ಕರ್ನಾಟಕದಲ್ಲಿ ಒಳಮಿಸಲು ಸಮೀಕ್ಷೆಗೆ 70 ಸಾವಿರ ಶಿಕ್ಷಕರ ಬಳಕೆ; ಎಲ್ಲಿ? ಹೇಗೆ?

ಕರ್ನಾಟಕದಲ್ಲಿ ಒಳಮಿಸಲು ಸಮೀಕ್ಷೆಗೆ 70 ಸಾವಿರ ಶಿಕ್ಷಕರ ಬಳಕೆ; ಎಲ್ಲಿ? ಹೇಗೆ?

ನ್ಯಾ.ಎಚ್‌.ಎನ್‌. ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಯ ಒಳ ಮೀಸಲಾತಿಗಾಗಿ ದತ್ತಾಂಶ ಸಂಗ್ರಹಿಸಲು ಸಮೀಕ್ಷೆ ನಡೆಸಲಿದ್ದು, ಇದರಲ್ಲಿ ಸುಮಾರು 70 ಸಾವಿರ ಶಿಕ್ಷಕರು ಭಾಗವಹಿಸಲಿದ್ದಾರೆ. ಮೇ 5 ರಿಂದ 17 ರವರೆಗೆ ನಡೆಯುವ ಈ ಸಮೀಕ್ಷೆಯಲ್ಲಿ ಶಿಕ್ಷಕರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿಗಳು ಸಮೀಕ್ಷೆಯ ಯಶಸ್ಸಿಗೆ ಸಹಕರಿಸಲು ಎಲ್ಲಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು: ನ್ಯಾ.ಎಚ್‌.ಎನ್‌. ನಾಗಮೋಹನ್‌ ದಾಸ್‌ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲು ಕುರಿತು ದತ್ತಾಂಶ ಸಂಗ್ರಹಕ್ಕೆ ನಡೆಯಲಿರುವ ಸಮೀಕ್ಷಾ ಕಾರ್ಯದಲ್ಲಿಅಂದಾಜು 70 ಸಾವಿರಕ್ಕೂ ಹೆಚ್ಚು ಶಿಕ್ಷಕರು ಭಾಗಿಯಾಗಲಿದ್ದಾರೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದ್ದು, ಕರಾರುವಕ್ಕಾದ ಪ್ರಮಾಣೀಕೃತ ಮಾಹಿತಿ ಪಡೆಯುವ ಸಲುವಾಗಿ ಸಮೀಕ್ಷಾ ಕಾರ್ಯಕ್ಕೆ 58,932 ಶಿಕ್ಷಕರನ್ನು ಗಣತಿದಾರರನ್ನಾಗಿ ಗುರುತಿಸಲಾಗುತ್ತದೆ. ಜತೆಗೆ, ಶೇ.10ರಷ್ಟು ಶಿಕ್ಷಕರನ್ನು ಹೆಚ್ಚುವರಿಯಾಗಿ ಗಣತಿದಾರರನ್ನಾಗಿ ಕಾಯ್ದಿರಿಸಲಾಗುತ್ತದೆ. ಹಾಗೆಯೇ 10 ರಿಂದ 12 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರಂತೆ 5,000 ಮೇಲ್ವಿಚಾರಕರನ್ನು ಗುರುತಿಸುವಂತೆ ಸೂಚಿಸಲಾಗಿದೆ.

ಜಿಲ್ಲಾವಾರು ಅಗತ್ಯವಿರುವ ಗಣತಿದಾರರ ಸಂಖ್ಯೆಯನ್ನು ಸರಕಾರ ಸೂಚಿಸಿದ್ದು, ಅಷ್ಟು ಪ್ರಮಾಣದ ಶಿಕ್ಷಕ ಗಣತಿದಾರರನ್ನು ಗುರುತಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ.

ಪ್ರತಿ ಮತಗಟ್ಟೆಗೆ ಒಬ್ಬ ಶಿಕ್ಷಕ ಗಣತಿದಾರನ ನೇಮಕವಾಗಲಿದೆ. ಆಶಾ ಕಾರ್ಯಕರ್ತೆಧಿಯರು, ಅಂಗನವಾಡಿ ಕಾರ್ಯಕರ್ತೆಯರ ನೇಮಕ ಮಾಡಬಾರದು ಎಂದು ನಿರ್ದೇಶನ ನೀಡಲಾಗಿದೆ. ಶಿಕ್ಷಕರು ಬೂತ್‌ ಲೆವೆಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 10 – 12 ಶಿಕ್ಷಕರಿಗೆ ಒಬ್ಬರು ಮೇಲುಸ್ತುವಾರಿ ಇರಲಿದ್ದು, ಶಾಲೆಯ ಮುಖ್ಯ ಶಿಕ್ಷಕರಿಗೆ ಈ ಹೊಣೆ ವಹಿಸಲಾಗುತ್ತದೆ. ಮೇ 20ರೊಳಗೆ ತರಬೇತಿ ಮತ್ತು ಸಮೀಕ್ಷೆ ನಡೆಯಲಿದ್ದು, ಶಾಲಾ ಶಿಕ್ಷಣ ಇಲಾಖೆ ಗುರುತಿಸಿದ ಶಿಕ್ಷಕರಿಗೆ ಜಿಲ್ಲಾಧಿಕಾರಿಗಳು ನೇಮಕಾತಿ ಆದೇಶ ನೀಡಲಿದ್ದಾರೆ.

ಜಿಲ್ಲಾದ್ಯಂತ ಶಿಕ್ಷಕ ಗಣತಿ
ಪರಿಶಿಷ್ಟ ಜಾತಿಯ ಒಳ ಮೀಸಲು ಕುರಿತಂತೆ ಮೇ 5 ರಿಂದ 17 ರವರೆಗೆ 12 ದಿನಗಳ ಕಾಲ ಜಿಲ್ಲಾದ್ಯಂತ ಶಿಕ್ಷಕ ಗಣತಿದಾರರ ಮೂಲಕ ಮನೆ ಮನೆ ಸಮೀಕ್ಷೆ ನೆಡೆಸಲಾಗುತ್ತಿದ್ದು, ಪರಿಶಿಷ್ಟ ಜಾತಿ ಸಮುದಾಯದವರು ಮಾಹಿತಿ ಹಾಗೂ ವಿವರವನ್ನು ಗಣತಿದಾರರರಿಗೆ ಒದಗಿಸುವಂತೆ ಜಿಲ್ಲಾಧಿಕಾರಿ ಪಿಎನ್‌ ರವೀದ್ರ ಮನವಿ ಮಾಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿಯ ಒಳ ಮೀಸಲು ಸಮೀಕ್ಷೆ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರದಿಂದ ನೇಮಕವಾಗಿರುವ ನ್ಯಾ.ಎಚ್‌.ಎನ್‌.ನಾಗಮೋಹನ್‌ ದಾಸ್‌ ಅವರ ಏಕ ಸದಸ್ಯ ವಿಚಾರಣೆ ಆಯೋಗವು ಪರಿಶಿಷ್ಟ ಜಾತಿಗಳ ನಾನಾ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹ ಮಾಡಿ ಶೇಖರಿಸುವ ಸಂಬಂಧ ರಾಜ್ಯಾದ್ಯಂತ ಸಮೀಕ್ಷೆ ನೆಡೆಸಲು ತೀರ್ಮಾನಿಸಿದೆ. ಅದರಂತೆ ಜಿಲ್ಲಾದ್ಯಂತ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿರುವ ಮತಗಟ್ಟೆಗೆ ಒಬ್ಬರಂತೆ ಗಣತಿದಾರರನ್ನು ನೇಮಕ ಮಾಡಿ ಆ ಸಮೀಕ್ಷೆ ಮಾಡಲಾಗುತ್ತದೆ ಎಂದರು.

ಈ ಗಣತಿದಾರರನ್ನಾಗಿ ಶಿಕ್ಷಕರನ್ನು ಮಾತ್ರವೇ ನೇಮಿಸಲಾಗುತ್ತದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಯಾವುದೇ ಕಾರಣಕ್ಕೂ ನೇಮಕ ಮಾಡಬಾರದು. ಸಮೀಕ್ಷೆಯನ್ನು ಆಂಡ್ರಾಯ್ಡ್‌ ಮೊಬೈಲ್‌ ಮೂಲಕ ಆನ್‌ಲೈನ್‌ನಲ್ಲೇ ನಮೂದು ಮಾಡಬೇಕಾಗಿರುತ್ತದೆ. ಪ್ರಶ್ನಾವಳಿ ಮೂಲಕ ಮಾಹಿತಿಯನ್ನು ಸವಿಸ್ತಾರವಾಗಿ ಸಂಗ್ರಹಿಸಬೇಕಾಗಿರುತ್ತದೆ ಎಂದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This