ಔರಾದ(ಬಾ) ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣರವರ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ರವರ ಜಯಂತಿ ನಿಮಿತ್ಯ ಶಿಕ್ಷಕರ ದಿನ ಹಾಗೂ ಅಭಿಯಂತರ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಾಣಿಕರಾವ್ ನೆಳಗೆ ಅವರು ಮಾತನಾಡಿ ವಿಶ್ವದ ಸಮಗ್ರ ಅಭಿವೃದ್ಧಿಯಲ್ಲಿ ಇಂಜಿನಿಯರ್ ಪಾತ್ರ ಮಹತ್ವದಾಗಿದ್ದು ಪ್ರಸ್ತುತ ವಿದ್ಯಾರ್ಥಿ ಜೀವನದಲ್ಲಿ ಮುಂದಿನ ದಿನಗಳಲ್ಲಿ ದೇಶ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ವಿಜಯಶೆಟ್ಟಿರವರು ವಹಿಸಿದ್ದು,
ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರನ್ನು ಕಿರುಕಾಣಿಕೆ ನೀಡಿ ಶಿಕ್ಷಕರ ದಿನವನ್ನು ಆಚರಿಸಿದರು ವಿಭಾಗಾಧಿಕಾರಿಗಳಾದ ಶ್ರೀ ಕಾಳೆ ಹಣಮಂತ, ಪುಷ್ಪರಾಜ್, ಅಭಿಷೇಕ, ಸಂದೀಪ, ಪೂರ್ಣಿಮಾ,ಸಂತೋಷಿ, ಆಶಿಷಕುಮಾರ ಹಾಗೂ ಸಮಸ್ತ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಶಾಂತಕುಮಾರ ಅವರು ನೆರವೇರಿಸಿದರು







