2023-24 ನೇ ಸಾಲಿನಲ್ಲಿ ಔರಾದ (ಬಿ) ಪಟ್ಟಣದಲ್ಲಿ ಡಾ।। ಬಿ ಆರ್ ಅಂಬೇಡ್ಕರ ಭವನ ನಿರ್ಮಾಣಕ್ಕಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಲೋಕೋಪಯೋಗಿ ಇಲಾಖೆ ಸಂತಪೂರ ಇವರಿಗೆ ಒಂದು ಕೋಟಿ ರೂ.ಅನುಧಾನ ಬಿಡುಗಡೆಯಾಗಿದ್ದು ಸದರಿ ತಾವುಗಳು ಔರಾದ ಪಟ್ಟಣ ಹಿತದೃಷ್ಠಿಯಿಂದ ಸಮುದಾಯದ ಒಳಿತಿಗಾಗಿ ಧಾರ್ಮಿಕ ಕಾರ್ಯಕ್ರಮಗಳು. ಗ್ರಂಥಾಲಯ ವಿವಿಧ ಚಟುವಟಿಕೆಗಳು ಇನ್ನಿತರ ಸಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ನಮ್ಮ ಸಮುದಾಯಕ್ಕೆ ತಾಲೂಕು ಮಟ್ಟದಲ್ಲಿ ಡಾ| ಬಿ ಆರ್ ಅಂಬೇಡ್ಕರ ಭವನ ಅತ್ಯವಶಕವಾಗಿದ್ದೆ, ಸದರಿ ತಾವುಗಳು ಕೂಡಲೇ ನಿವೇಷನ ಮಂಜೋರು ಮಾಡಿ ನೂತನ ಭವನ ಕಟ್ಟಡ ಕಾಮಗಾರಿ ಚಾಲನೆ ಮಾಡಬೇಕು, ಒಂದು ಬೆಳೆ ಮಾರ್ಚಿ 31 ಒಳಗಾಗಿ ನಿವೆಷ ಮಂಜೂರು ಮಾಡದೆ ಇದ್ದಲ್ಲಿ ತಮ್ಮ ಕಛೇರಿ ಎದುರುಗಡೆ ಅನಿರ್ದಿಷ್ಟ ಧರಣಿ ಸತ್ಯ ಗ್ರಹ ಮಾಡಲಾಗುವುದೆಂದು ಡಾ॥ ಬಿ ಆರ್ ಅಂಬೇಡ್ಕರ ನೂತನ ಭವನ ನಿಮಾರ್ಣ ಹೋರಾಟ ಸಮಿತಿ ಔರಾದ (ಬಿ) ವತಿಯಿಂದ ಎಚ್ಚರಿಸಲಾಗಿದೆ ಎಂದು ಸಮಿತಿಯ ಎಲ್ಲಾ ಪದಾಧಿಕಾರಿಗಳಾದ ಶ್ರೀ ಸುಭಾಷ ಲಾಧಾ,ಶ್ರೀ ಸಂತೋಷ ಶಿಂದೆ, ಶ್ರೀ ಸಂತೋಷ ಸೂರ್ಯವಂಶಿ,ಶ್ರೀ ನೌನಾಥ ಚಟನಾಳ, ಶ್ರೀ ದತ್ತಾತ್ರಿ ಮುಂಗನಾಳ, ಶ್ರೀ ರಾಜಕುಮಾರ ಜಿರ್ಗಾ ಶ್ರೀ ಝರಪ್ಪ ವರ್ಮಾ, ಶ್ರೀ ಪಂಡರಿ ಕಸ್ತೂರೆ, ಶ್ರೀ ರಾಹುಲ ಬೋಲೆ, ಶ್ರೀ ತಾನಾಜಿ ತೋರ್ಣೆಕರ, ಶ್ರೀ ಗಂಪತರಾವ ಶೆಂಬೆಳ್ಳಿ, ಶ್ರೀರಾಹುಲ ಖಂದಾರೆ, ಶ್ರೀ ಉತ್ತಮ ಮಂಜರೆಕಾರ್, ಶ್ರೀ ಸಂಜುಕುಮಾರ ನಾಗೂರ, ಶ್ರೀ ಮಲ್ಲಿಕಾರ್ಜುನ ಜೋನ್ನಿಕೆರಿ ಎಲ್ಲರು ಹೇಳಿದ್ದಾರೆ.







