Home » ಬೀದರ ಜಿಲ್ಲೆ » ಔರಾದ್ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನ ಆಚರಣೆ

ಔರಾದ್ ಪಟ್ಟಣದಲ್ಲಿ  ಡಾ. ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನ ಆಚರಣೆ

ಔರಾದ್ ಪಟ್ಟಣ: ಡಿಸೆಂಬರ್ 6 – ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಚಿಂತಕ ಹಾಗೂ ಸಮಾಜ ಪರಿವರ್ತಕ ಡಾ. ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನವನ್ನು ಔರಾದ್ ಪಟ್ಟಣದ ಮಹಾ ಬೌದ್ಧಿ ಸೊಸೈಟಿ ವತಿಯಿಂದ ಭಾವಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಪಟ್ಟಣದ APMC ಕ್ರಾಸ್ ಸಮೀಪ  ಡಾ. ಅಂಬೇಡ್ಕರ್ ರವರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು. ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ಸಂಘದ ಪ್ರತಿನಿಧಿಗಳು ಮಾತನಾಡಿ,
“** ಡಾ. ಬಿ.ಆರ್. ಅಂಬೇಡ್ಕರ್ ರವರು ನಮ್ಮ ದೇಶಕ್ಕೆ ನೀಡಿದ ಕೊಡುಗೆ ಅಪ್ರಮೇಯ. ಸಂವಿಧಾನದ ಮೂಲಕ ಎಲ್ಲರಿಗೂ ಹಕ್ಕು–ಮರ್ಯಾದೆ, ಸಮಾನತೆ ನೀಡಿ, ದೇಶದ ಪ್ರತಿಯೊಂದು ಸಮುದಾಯದ ಜನರ ಬದುಕನ್ನು ಬದಲಿಸಿದ ಮಹಾನ್ ಮಾನವತಾವಾದಿ ಅವರು. ದೇಶದ ಏಕತೆ, ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಮಾನವ ಹಕ್ಕುಗಳ ಬಗ್ಗೆ ಅಂಬೇಡ್ಕರ್ ರವರು ನೀಡಿದ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವುದು ಪ್ರತಿಯೊಬ್ಬರ ಕರ್ತವ್ಯ ಆದೇರೀತಿ ಪ್ರತಿಯೊಂದು ಸಮುದಾಯದ ಜನರಿಗೆ ನೀಡಿದ ಸಹಾಯ ಹಾಗೂ ಸೇವೆಗಳು ಅಮೂಲ್ಯ. ಸಂವಿಧಾನದ ಮೂಲಕ ಸಮಾನತೆ, ಹಕ್ಕು, ನ್ಯಾಯ ಮತ್ತು ಮಾನವೀಯತೆಯ ದೀಪ ಹಚ್ಚಿದ ಮಹಾಮನುಷಿ ಅವರ ಸೇವೆಗೆ ನಾವು ಯುಗಯುಗಾಂತರಗಳವರೆಗೆ ರುಣಿ,” ಎಂದು ಭಾವೋದ್ಗಾರ ವ್ಯಕ್ತಪಡಿಸಿದರು ಎಂದು ಮಹಾಬೌದ್ಧಿ ಸೊಸೈಟಿ ಪ್ರತಿನಿಧಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಪಟ್ಟಣದ  ಶ್ರೀ ಸೋಪಾನರಾವ ಡೋಂಗ್ರೆ, ಶ್ರೀ ಶಿವರಾಜ್ ಝಲಂಡೆ, ಶ್ರೀ ಸಂಜು ಡೋಂಗ್ರೆ, ಅಂಬರವಡೆ ಸರ್, ಬೇಂದ್ರೆ ಸರ್, ಸುಧಾಕರ್ ಕೊಳ್ಳುರು, ಶ್ರೀ ನಂದಾದೀಪ ಬೋರಳೆ, ಶ್ರೀ ಪ್ರಕಾಶ್ ಬಂಗಾರೆ, ಸುನಿಲ್ ಮಿತ್ರಾ, ಅಮಿತ್ ಶಿಂದೆ, ಪ್ರೇಮಸಾಗರ್ ಗೊಡಬೋಲ್ ಮತ್ತು  ಎಲ್ಲಾ ಅಂಬೇಡ್ಕರವಾದಿ, ಸಂವಿಧಾನವಾದಿ ಮತ್ತು ದೇಶ ಪ್ರೇಮಿಗಳಾದವ್ರು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ, ಅಂಬೇಡ್ಕರ್ ರವರ ಸಂದೇಶಗಳನ್ನು ಪುನರುಚ್ಚರಿಸಿದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This