ಔರಾದ: ಮಹಾ ಮಾನವತಾವಾದಿ, ಸಂವಿಧಾನದ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನವನ್ನು ಔರಾದ್ ಪಟ್ಟಣದಲ್ಲಿ ಭಾವಪೂರ್ಣವಾಗಿ ಆಚರಣೆಯಾಯಿತು.
ಈ ಸಂದರ್ಭದಲ್ಲಿ ಔರಾದ್ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರ ಸಾನ್ನಿಧ್ಯದಲ್ಲಿ, ಬಹುಜನ ಜನಸಂಪರ್ಕ ಕಾರ್ಯಾಲಯದ ವ್ಯವಸ್ಥಾಪಕರಾದ ಶ್ರೀ ರಾಹುಲ್ ಖಂದಾರೆ, ಶ್ರೀ ಸುಭಾಷ್ ಲಾಧಾ.ಶ್ರೀ ಸಿದ್ದಾರ್ಥ್ ಭೊಸ್ಲೆ, ಶ್ರೀ ಸಂತೋಷ್ ಶಿಂದೆ, ಪ್ರವೀಣ್ ಕಾರಂಜಿ, ಬಸವರಾಜ್ ಕಾಂಬಳೆ, ದಿನೇಶ್ ಶಿಂದೆ, ಸುಂದರ್ ಮೇತ್ರೆ, ಸಂತೋಷ ಸೂರ್ಯವಂಶಿ,ರಾಮ ಗೊಡಬೋಲೆ, ಸೋಪಾನರಾವ ಡೂಂಗ್ರೆ, ಅನಿಲ್ ಭುಜಂಗ ಮತ್ತು ಚಂದ್ರಕಾಂತ್ ಕಾಂಬ್ಳೆ ನೇತೃತ್ವದಲ್ಲಿ ವಿಶೇಷ ಸೇವಾ ಕಾರ್ಯ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆ ಮುಖಂಡರು, ಪ್ರಗತಿಪರ ಚಿಂತಕರು, ಯುವ ಹೋರಾಟಗಾರರು, ಸಮಾಜದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು. ಮಹಾಪರಿನಿರ್ವಾಣ ದಿನದ ಉಪಲಕ್ಷ್ಯದಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ಎಲ್ಲಾ ರೋಗಿಗಳಿಗೆ ಹಣ್ಣು–ಹಂಪಲು ವಿತರಿಸಿ, ಡಾ. ಅಂಬೇಡ್ಕರ್ ಅವರ ಸ್ಮರಣೆಗೆ ಭಾವಪೂರ್ವಕ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮವು ಮಾನವತೆಯ ಸಂಕೇತವಾಗಿದ್ದು, ಜನಸೇವೆ ಅಂಬೇಡ್ಕರ್ ತಾತ್ವಿಕತೆಯ ಮೂಲ ಅಂಶ ಎಂಬ ಸಂದೇಶವನ್ನು ಸಾರಿತು.










