Home » ಬೀದರ ಜಿಲ್ಲೆ » ಔರಾದ್‌ನಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸರ್ವಾನುಮತ ಆಯ್ಕೆ

ಔರಾದ್‌ನಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸರ್ವಾನುಮತ ಆಯ್ಕೆ

ಔರಾದ್: ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ತಾಲೂಕಿನ ಸರ್ವ ಸರ್ಕಾರಿ ನೌಕರರ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಂಘದ ತಾಲೂಕು ಅಧ್ಯಕ್ಷರಾಗಿ ರವಿ ಡೋಳೆ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ ಕೋಟೆ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು. ಗೌರವ ಸಲಹೆಗಾರರಾಗಿ ಗೋವಿಂದ ಪಾಟೀಲ, ಉಪಾಧ್ಯಕ್ಷರಾಗಿ ಸಂಜೀವರಡ್ಡಿ ಖಂದಾಡೆ ಹಾಗೂ ಫಯಾಜ್ ಕೊಳ್ಳುರ, ಸಂಘಟನಾ ಕಾರ್ಯದರ್ಶಿಗಳಾಗಿ ಸಂಜುಕುಮಾರ ಮುಧಾಳೆ ಮತ್ತು ನಾಗೇಶ ಪಟ್ನೆ, ಸಹ ಕಾರ್ಯದರ್ಶಿಗಳಾಗಿ ಉಮಾಕಾಂತ ಮೂಗಟೆ ಮತ್ತು ಮಿಲಿಂದ ಸೋನಕಾಂಬಳೆ, ನಿರ್ದೇಶಕರಾಗಿ ರಾಮ ಮೊರೆ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಂಡರಿ ಆಡೆ, “ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘವು 371(ಜೆ) ವಿಶೇಷ ಸ್ಥಾನಮಾನದಡಿ ಈ ಭಾಗದ ಸರ್ಕಾರಿ ನೌಕರರು ಎದುರಿಸುವ ಸಮಸ್ಯೆಗಳನ್ನು ಸಂಘಟಿತವಾಗಿ ಪರಿಹರಿಸಲು ದುಡಿಯುತ್ತಿರುವ ಸಂಘವಾಗಿದೆ. ಶೈಕ್ಷಣಿಕ ಅಭಿವೃದ್ಧಿ ಸೇರಿದಂತೆ ಸಂವಿಧಾನದ ವಿಶೇಷ ಸ್ಥಾನಮಾನದ ಆಶಯಗಳನ್ನು ಈಡೇರಿಸಲು ಸಂಘ ನಿರಂತರವಾಗಿ ಶ್ರಮಿಸುತ್ತಿದೆ” ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸಂಜುಕುಮಾರ ಮೇತ್ರೆ ಮಾತನಾಡಿ, “ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರ ಬಡ್ತಿ, ವರ್ಗಾವಣೆ ಸೇರಿದಂತೆ ಹಲವು ಆದೇಶಗಳು 2013ರಿಂದ 371(ಜೆ) ವಿಶೇಷ ಸ್ಥಾನಮಾನದಡಿ ಪ್ರತ್ಯೇಕವಾಗಿ ಹೊರಬರುತ್ತಿದ್ದು, ಅನೇಕ ಬಾರಿ ಸಮಸ್ಯೆಗಳು ಪರಿಹಾರವಿಲ್ಲದೇ ಉಳಿಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಈ ಭಾಗದ ಬಲಿಷ್ಠ ಸಂಘಟನೆಯ ಅವಶ್ಯಕತೆ ಹೆಚ್ಚಾಗಿದೆ” ಎಂದರು.
ಇದೇ ಸಂದರ್ಭದಲ್ಲಿ ನಡೆದಾಡುವ ದೇವರೆಂದೇ ಖ್ಯಾತಿ ಪಡೆದ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ 136ನೇ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಸಭೆಯಲ್ಲಿ ಸಂಘದ ಪ್ರಧಾನ ಘಟಕ ನಿರ್ದೇಶಕ ಗೋಣಿಬಸಪ್ಪ ಜೋಗೆರ ಸೇರಿದಂತೆ ನೌಕರರಾದ ದಶರಥ ವಾಗ್ಮರೆ, ಭೂಷಣ ಪಾಟೀಲ, ಸುನಿಲ ಜಾಧವ, ಸಂತೋಷ ತಂಬಾಕೆ, ಪ್ರಕಾಶ್ ಬಿರಾದಾರ, ಶಿವಾಜಿ, ಅಮೋಲ ವಾಘಮಾರೆ, ನರಸಪ್ಪ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This