Home » ಬೀದರ ಜಿಲ್ಲೆ » ಔರಾದ[ಬಿ] ಪಟ್ಟಣದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಅಧಿಕಾರಿಗೆ ಶಿಫಾರಿಸು.

ಔರಾದ[ಬಿ] ಪಟ್ಟಣದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಅಧಿಕಾರಿಗೆ ಶಿಫಾರಿಸು.

ಔರಾದ ಪಟ್ಟಣದಲ್ಲಿ ಹಲವಾರು ಸಮಸ್ಯೆಗಳು ಇದ್ದಿವೆ ಆದರೆ ಇಲ್ಲಿ ಪಟ್ಟಣದ ವಾರ್ಡ ನಂಬರ 20 ರಲ್ಲಿ ಈ ಕೆಳಗಿನ ಕೆಲವು ಸಮಸ್ಯೆಗಳು ಬಗೆಹರಿಸಲು ತಾಲೂಕ ಪಂಚಾಯತ ಮುಖ್ಯ ಅಧಿಕಾರಿಗಳಿಗೆ ಮುಂಚೆ ದಿನಾಂಕ 06-02-2024 ರಂದು ಲಿಖಿತ ಅರ್ಜಿ ಸಲ್ಲಿಸಿದರೂ ಇದುವರೆಗೆ ಸಮಸ್ಯೆಗಳು ಬಗೆಹರಿಸಿ -ರುವುದಿಲ್ಲಕ್ಕಾಗಿ, ರಾಷ್ಟ್ರೀಯ ಅಹಿಂದ ಯುವ ಘಟಕದ ರಾಜ್ಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಎಸ್ ದೇವಕತ್ತೆ, ರಾಹುಲ ಜಾಧವ ಜಿಲ್ಲಾ ಉಪಾಧ್ಯಕ್ಷ, ಸಚೀನ ಮೇತ್ರೆ ತಾಲೂಕು ಅಧ್ಯಕ್ಷ, ಇರ್ಷಾದ ತಾಲ್ಲೂಕ ಅಲ್ಪಸಂಖ್ಯಾತರ ಅಧ್ಯಕ್ಷ, ಆಕಾಶ ಮೇತ್ರೆ ಯುವ ಘಟಕದ ತಾಲ್ಲೂಕ ಅಧ್ಯಕ್ಷ, ಅನೀಲ ವಾಡೇಕರ.ಉಮಾಕಾಂತ ಸೋನೆ  ಮತ್ತು ರಾಜು ಮುಧಾಳೆ ಯುವ ಮುಖಂಡರು ಮತ್ತು ಈ ಸಂಘಟನೆಯ ಪದಾಧಿಕಾರಿಗಳಿಂದ ಬೀದರ್ ಜಿಲ್ಲಾಧಿಕಾರಿಯವರಿಗೆ ಪರಿಹಾರಕ್ಕಾಗಿ ಶಿಫಾರೀಸ್ ಮಾಡುವ ಕುಖಾಂತರ ಅಧಿಕಾರಿಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಾಷ್ಟ್ರೀಯ ಅಹಿಂದ ಯುವ ಘಟಕದ ರಾಜ್ಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಎಸ್ ದೇವಕತ್ತೆ ಹೇಳಿದರು .

ಸಮಸ್ಯೆಗಳ ವಿವಿರ ಈ ಕೆಳಗಿನಂತಿವೆ?
1] ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಹೊಗುವ ದಾರಿಯಲ್ಲಿ ಶೌಚಾಲಯದ ಮತ್ತು ಚರಂಡಿ ನೀರು ಹರಿದು ಬಂದು ರಸ್ತೆ ಮೇಲೆ ನಿಲ್ಲುತ್ತಿವೆ ಇದರ ಸಮಸ್ಯೆ ಸಲುವಾಗಿ ಹಲವು ಸಲ ಪಟ್ಟಣ ಪಂಚಾಯತದಕ್ಕೆ ಅರ್ಜಿ ಸಲ್ಲಿಸಿರುತ್ತೇವೆ. ಆದರೆ ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿಗಳು ಏನೆ ಕ್ರಮ ತೆಗೆದುಕೊಂಡಿಲ್ಲ.

2] ಪಟ್ಟಣ ಪಂಚಾಯತ ಎದುರುಗಡೆ ಪತ್ರಿ ಸ್ವಾಮಿ ರಿಂಗ ರೋಡ ಹತ್ತಿರ ವಾಹನಗಳು ಅತಿ ವೇಗವಾಗಿ ಚಲಿಸುತ್ತಿವೆ. ಇಲ್ಲಿ ಶಾಲೆ ಮಕ್ಕಳು ರಸ್ತೆ ದಾಟಿಕೊಂಡು ಹೊಗುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ.ಈ ಸ್ಥಳದಲ್ಲಿ ಬ್ಯಾರಿಗೇಡ್ಸ್ ಹಾಕಿ ಎಂದು ಅರ್ಜಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ.

3] ಔರಾದ[ಬಿ] ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಿಎಂಒ ಮತ್ತು ಟಿಎಚ್‌ಒ ಎರಡು ಹುದ್ದೆಯಲ್ಲಿ ಒಬ್ಬರೆ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರ ಸಮಸ್ಯೆ ಬಗೆ ಹರಿಯುತ್ತಿಲ್ಲ.

4) ಎಸ್.ಸಿ ಮತ್ತು ಎಸ್.ಟಿ. ಜನರಿಗೆ ಎಕ್ಷರೆ, ರಕ್ತ ಪರೀಕ್ಷೆ ಹಾಗೂ ಇನ್ನಿತರ ಪರೀಕ್ಷೆ ಉಚಿತವಾಗಿ ಇದ್ದರು ಕೂಡಾ ಹಣ ತೆಗೆದುಕೊಳ್ಳುತ್ತಿದ್ದಾರೆ. ಬಿಪಿಎಲ ಕಾರ್ಡುದಾರರಿಗೆ ಕೂಡಾ ಉಚಿತವಾಗಿ ಸೌಲಭ್ಯ ಒದಗಿಸುತ್ತಿಲ್ಲ. ಇದರ ಮಾಹಿತಿ ನೀಡುತ್ತಿಲ್ಲ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This