Home » ರಾಜ್ಯ » ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕ ಪದಾಧಿಕಾರಿಗಳ ರಚನೆ

ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾ  ಘಟಕ ಪದಾಧಿಕಾರಿಗಳ ರಚನೆ

ಬಿದರ್: ನಗರದ ಶಹಾಗಂಜನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಬೀದರಿನ ಹಲವಾರು ಹಿರಿಯ ಸಮಾಜ ಚಿಂತಕರು ಹಾಗೂ ಮುಖಂಡರು ಅವರು ಚರ್ಚಿಸಿ ಕರ್ನಾಟಕ ರಾಜ್ಯ ಬಲಗೈ ಪರಿಶಿಷ್ಟ ಜಾತಿ ಸಂಬಂಧಿತ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಬೀದರ್ ಜಿಲ್ಲಾ ಘಟಕ ರಚಿಸಿ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಜಿಲ್ಲಾಧ್ಯಕ್ಷರಾಗಿ ಮಾರುತಿ ಬೌದ್ದೆ, ಗೌರವಾಧ್ಯಕ್ಷರಾಗಿ ಕಾಶಿನಾಥ ಚೆಲ್ವಾ, ಉಪಾಧ್ಯಕ್ಷರಾಗಿ ವಿಠ್ಠಲದಾಸ ಪ್ಯಾಗೆ, ಮಹಾಲಿಂಗ ಬೆಲ್ದಾಳ, ಗಂಗಮ್ಮಾ ಫುಲೆ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ ಗೋರನಾಳಕರ್, ಜಿಲ್ಲಾ ಸಹ ಕಾರ್ಯದರ್ಶಿಯಾಗಿ ರಾಜಪ್ಪಾ ಗೂನಳ್ಳಿಕರ್, ಪ್ರಶಾಂತ ದೋಡ್ಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವಿನಯ ಮಾಳಗೆ, ವಿನೋದಕುಮಾರ ಬಂದಗೆ, ಖಜಾಂಚಿಯಾಗಿ ದಶರಥ ಗುರು ಅವರನ್ನು ನೇಮಿಸಲಾಯಿತು ಎಂದು ಮಾರುತಿ ಬೌಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This